Friday, July 2, 2010













ಬೆಚ್ಚನೆ
ಹಾಸಿಗೆ


ಚುಮು-ಚುಮು ಚಳಿ ರೂರ್ಕಿಯಲ್ಲಿ
ಕಣ್ಣು ಕಾಣದು ಇದರಲ್ಲಿ
ತಿಂಡಿಯೂ ಬೇಡ, ಬ್ರಶು ಬೇಡ
ಬೆಚ್ಚನೆ ಹಾಸಿಗೆಯಲಿ ಮಲಗಿರುವಾಗ ||೧ ||

ಮಮ್ಮಿ ಫೋನ್ ಮಾಡಿದ್ರು 7 ಕ್ಕೆ
ಫ್ರೆಂಡ್ಸು ಎಬ್ಸಿದ್ರು 7:30 ಕ್ಕೆ
ಕ್ಲಾಸಿಗೆ ಹೋಗಬೇಕು 8 ಕ್ಕೆ
ಬೆಚ್ಚನೆ ಹಾಸಿಗೆಯಲಿ ಮಲಗಿರುವಾಗ ||೨||

ಕಲರ್-ಕಲರ್ ಡ್ರೀಮ್ಸ್
ಒಂದರ ನಂತರ ಮತ್ತೊಂದು
ಹೋಮವರ್ಕ್ ಟೆನ್ಶನ್
ಅದರಲ್ಲಿ
ಬೆಚ್ಚನೆ ಹಾಸಿಗೆಯಲಿ ಮಲಗಿರುವಾಗ ||೩||

ಚಳಿಯಲಿ ಬಂದ್ರೆ SUNDAY
ಮಾಡ್ಬೇಕು ನಿದ್ದೆಯ ಡಬಲ್
ಫ್ರೆಂಡ್ಸ್ ಕರಿತಾರೆ ಕ್ರಿಕ್ಕೆಟ್ಗೆ
ಬೆಚ್ಚನೆ ಹಾಸಿಗೆಯಲಿ ಮಲಗಿರುವಾಗ ||೪||

ಕಂಪ್ಯೂಟರ್ ತಿರ್ಗತ್ತೆ ಕಣ್ಮುಂದೆ
ಪುಸ್ತಕ ಓಡುತ್ತೆ ನಡು-ನಡುವೆ
ಫೋನುಗಳು ಬೇಕು ಅದರಮದ್ಯ
ಬೆಚ್ಚನೆ ಹಾಸಿಗೆಯಲಿ ಮಲಗಿರುವಾಗ ||೫||

------- ಮಂಜುನಾಥ ಶಂಕರ ಲಕ್ಕುಂಡಿ
M.TECH (Structural Dynamics)
IIT-ROORKEE